ಉಯ್ಯಾಲೆ
ಅರಿತು ಬೆರೆತಾ ಮನಗಳಿಗೆ ಮದುವೆ
ಮರಣೋತ್ತರ ಪರೀಕ್ಷೆ
ಸ್ವರ್ಗಕೋ ನರಕಕೋ ಸಿಗುವುದಲ್ಲಿ
ಖಚಿತ ಸುಳಿವು
ನಯನ ಮನೋಹರ ನದಿಯು ಧೊಪ್ಪೆಂದು
ಜಲಪಾತವಾಗಿ ಬೀಳುವುದೋ
ಕೆರೆಯ ನೀರಂತೆ ಪ್ರಶಾಂತವಾಗಿ
ನಿಲುವುದೋ ತಿಳಿವುದಲ್ಲಿ
ಜೋಡಿ ಉಯ್ಯಾಲೆಗಳು ಜೀಕಲಾರವು
ಜೊತೆಜೊತೆಗೆ ಆದಿಯಲಿ
ಹಗ್ಗವೇ ಬೇರೆ , ಹಲುಗೆಯೇ ಬೇರೆ
ತಲೆಯ ಮೇಲಿನ ತೊಲೆಯ ಹಿಡಿತವೂ ಬೇರೆ
ವೇಗ ಬೇರೆ , ಒಡಲ ರಾಗ ಬೇರೆ
ಹಿಂದೆ ನಿಂತು ನೂಕಿದ ಕೈಗಳು ಬೇರೆ ಬೇರೆ
ಜೊತೆಗೆ ಜೀಕುವುದು ಪೈಪೋಟಿ ಆದರೇನು ಗತಿ
ಒಂದೊಂದು ಹಲಗೆ ಒಂದೊಂದು ಕಡೆಗೆ
ಈ ಸ್ಪರ್ಧೆಯ ಸುಳಿಯಲ್ಲಿ ಗೆಲ್ಲರಿಲ್ಲ್ಯಾರೂ
ಹಗ್ಗ ಬಿಗಿದಾ ತೊಲೆಯು ತಟಸ್ಥವಾಗಿರಲು
ಜೊತೆಯ ನಗುಮೊಗ ಕಾಣೆ
ನಿಧಾನಿಸಲೇ ಬೇಕು ಜೀಕು
ಒಮ್ಮೆಮ್ಮೆ ಹಿಂದಾಗಿ, ಮತ್ತೊಮ್ಮೆ ಮುಂದಾಗಿ
ಕಳಚಬೇಕು ಒಡಲ ದಿಮಾಕು
ಆಗ ಬರೀ ಜೀಕೇ ಜೀಕು
ಸ್ವರ್ಗವ್ಯಾಕೆ ಬೇಕು ?
ಮರಣೋತ್ತರ ಪರೀಕ್ಷೆ
ಸ್ವರ್ಗಕೋ ನರಕಕೋ ಸಿಗುವುದಲ್ಲಿ
ಖಚಿತ ಸುಳಿವು
ನಯನ ಮನೋಹರ ನದಿಯು ಧೊಪ್ಪೆಂದು
ಜಲಪಾತವಾಗಿ ಬೀಳುವುದೋ
ಕೆರೆಯ ನೀರಂತೆ ಪ್ರಶಾಂತವಾಗಿ
ನಿಲುವುದೋ ತಿಳಿವುದಲ್ಲಿ
ಜೋಡಿ ಉಯ್ಯಾಲೆಗಳು ಜೀಕಲಾರವು
ಜೊತೆಜೊತೆಗೆ ಆದಿಯಲಿ
ಹಗ್ಗವೇ ಬೇರೆ , ಹಲುಗೆಯೇ ಬೇರೆ
ತಲೆಯ ಮೇಲಿನ ತೊಲೆಯ ಹಿಡಿತವೂ ಬೇರೆ
ವೇಗ ಬೇರೆ , ಒಡಲ ರಾಗ ಬೇರೆ
ಹಿಂದೆ ನಿಂತು ನೂಕಿದ ಕೈಗಳು ಬೇರೆ ಬೇರೆ
ಜೊತೆಗೆ ಜೀಕುವುದು ಪೈಪೋಟಿ ಆದರೇನು ಗತಿ
ಒಂದೊಂದು ಹಲಗೆ ಒಂದೊಂದು ಕಡೆಗೆ
ಈ ಸ್ಪರ್ಧೆಯ ಸುಳಿಯಲ್ಲಿ ಗೆಲ್ಲರಿಲ್ಲ್ಯಾರೂ
ಹಗ್ಗ ಬಿಗಿದಾ ತೊಲೆಯು ತಟಸ್ಥವಾಗಿರಲು
ಜೊತೆಯ ನಗುಮೊಗ ಕಾಣೆ
ನಿಧಾನಿಸಲೇ ಬೇಕು ಜೀಕು
ಒಮ್ಮೆಮ್ಮೆ ಹಿಂದಾಗಿ, ಮತ್ತೊಮ್ಮೆ ಮುಂದಾಗಿ
ಕಳಚಬೇಕು ಒಡಲ ದಿಮಾಕು
ಆಗ ಬರೀ ಜೀಕೇ ಜೀಕು
ಸ್ವರ್ಗವ್ಯಾಕೆ ಬೇಕು ?
Comments