Posts

Showing posts from 2012

ಉಯ್ಯಾಲೆ

ಅರಿತು ಬೆರೆತಾ ಮನಗಳಿಗೆ ಮದುವೆ ಮರಣೋತ್ತರ ಪರೀಕ್ಷೆ ಸ್ವರ್ಗಕೋ ನರಕಕೋ ಸಿಗುವುದಲ್ಲಿ ಖಚಿತ ಸುಳಿವು ನಯನ ಮನೋಹರ ನದಿಯು ಧೊಪ್ಪೆಂದು ಜಲಪಾತವಾಗಿ ಬೀಳುವುದೋ ಕೆರೆಯ  ನೀರಂತೆ ಪ್ರಶಾಂತವಾಗಿ ನಿಲುವುದೋ ತಿಳಿವುದಲ್ಲಿ ಜೋಡಿ ಉಯ್ಯಾಲೆಗಳು ಜೀಕಲಾರವು ಜೊತೆಜೊತೆಗೆ ಆದಿಯಲಿ ಹಗ್ಗವೇ ಬೇರೆ , ಹಲುಗೆಯೇ ಬೇರೆ ತಲೆಯ ಮೇಲಿನ ತೊಲೆಯ  ಹಿಡಿತವೂ ಬೇರೆ ವೇಗ ಬೇರೆ , ಒಡಲ ರಾಗ ಬೇರೆ ಹಿಂದೆ ನಿಂತು ನೂಕಿದ ಕೈಗಳು ಬೇರೆ ಬೇರೆ ಜೊತೆಗೆ ಜೀಕುವುದು ಪೈಪೋಟಿ ಆದರೇನು ಗತಿ ಒಂದೊಂದು ಹಲಗೆ ಒಂದೊಂದು ಕಡೆಗೆ ಈ ಸ್ಪರ್ಧೆಯ ಸುಳಿಯಲ್ಲಿ ಗೆಲ್ಲರಿಲ್ಲ್ಯಾರೂ ಹಗ್ಗ ಬಿಗಿದಾ ತೊಲೆಯು ತಟಸ್ಥವಾಗಿರಲು ಜೊತೆಯ ನಗುಮೊಗ ಕಾಣೆ ನಿಧಾನಿಸಲೇ ಬೇಕು ಜೀಕು ಒಮ್ಮೆಮ್ಮೆ ಹಿಂದಾಗಿ, ಮತ್ತೊಮ್ಮೆ ಮುಂದಾಗಿ ಕಳಚಬೇಕು ಒಡಲ ದಿಮಾಕು ಆಗ ಬರೀ ಜೀಕೇ ಜೀಕು ಸ್ವರ್ಗವ್ಯಾಕೆ ಬೇಕು ?

ಓಜಸ್ : ಚಾಚು ನೋಟವಾ ದಿಗಂತದಾಚೆ

ಓಜಸ್ : ಚಾಚು ನೋಟವಾ ದಿಗಂತದಾಚೆ ------------------------------------------- ದಿಕ್ಕನು ಬದಲಿಸೋ ಸೆಳೆವು ಧುಮುಕುವ ವೇಗದ ಹರಿವು ಕಟ್ಟುಪರಧಿಯ ಕಳಚುತ ಹೊರಗೆ ಬೆಳಕನು ಕಾಣುವ ತೆರವೂ ಚಾಚು ನೋಟವಾ ದಿಗಂತದಾಚೆ ಚಾಚು ನೋಟವಾ ದಿಗಂತದಾಚೆ  ಓಜಸ್ ಓಜಸ್ ಓಜಸ್ ಓಜಸ್ ವಿಶ್ವ ವಿಖ್ಯಾತಿಯ ಕಲಿಗಳೆಲ್ಲರೂ ಇಟ್ಟ ಹೆಜ್ಜೆಯಾ ಧಾಟಿಯಲಿ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಯ ವೈಭವಿಸುವ ಮಾರ್ದನಿಯಲ್ಲಿ ಚಾಚು ನೋಟವಾ ದಿಗಂತದಾಚೆ ಚಾಚು ನೋಟವಾ ದಿಗಂತದಾಚೆ  ಓಜಸ್ ಓಜಸ್ ಓಜಸ್ ಓಜಸ್ ದೇಶಭಾಷೆಯ ಬಿರುಕ ಮುಚ್ಚುತ ಮೇಲು ಕೇಳಿನ ಭಾವ ಅಳಿಸುತಾ ವರ್ಣಭೇಧವಾ ಧ್ವಂಸಗೊಳಿಸುತಾ ವಿಶ್ವಮಾನವ ಸಂದೇಶ ಸಾರುತಾ ಚಾಚು ನೋಟವಾ ದಿಗಂತದಾಚೆ ಚಾಚು ನೋಟವಾ ದಿಗಂತದಾಚೆ  ಓಜಸ್ ಓಜಸ್ ಓಜಸ್ ಓಜಸ್ ಸ್ನೇಹಶೀಲತೆಯ ಬೀಜ ಬಿತ್ತುತಾ ಪ್ರೀತಿ ಪ್ರೇಮದಾ ಸಾರ ಚೆಲ್ಲುತಾ ಕೀರ್ತಿಶನಿಯನು ದೂರಕಟ್ಟುತಾ ಕಲೆಯ ಶ್ರೇಷ್ಠತೆ ಪೈರು ತೆಗೆಯುತಾ ಚಾಚು ನೋಟವಾ ದಿಗಂತದಾಚೆ ಚಾಚು ನೋಟವಾ ದಿಗಂತದಾಚೆ  ಓಜಸ್ ಓಜಸ್ ಓಜಸ್ ಓಜಸ್ ಕಾಲ ಕರೆದಿಹುದು , ಬಾನು ತೆರೆದಿಹುದು ಕನಸ ನನಸಿಗೆ ದಾರಿ ಮೂಡಿಹುದು ಬೆಳಕು ಚೆಲ್ಲಿಹುದು , ರೆಕ್ಕೆ ಬಂದಿಹುದು ಹೊಸತು ನೋಟಕೆ ಕಣ್ಣು ಕಾದಿಹುದು ಚಾಚು ನೋಟವಾ ದಿಗಂತದಾಚೆ ಚಾಚು ನೋಟವಾ ದಿಗಂತದಾಚೆ ಓಜಸ್ ಓಜಸ್ ಓಜಸ್ ಓಜಸ್

ಸಂಕ್ರಾಂತಿಯ ಶುಭಾಷಯಗಳು

ಎಲ್ಲರಿಗೂ ಸಂಕ್ರಾಂತಿಯ ಶುಭಾಷಯಗಳು ------------------------------ ------------------ ಎಳ್ಳಿನಂದದಿ ಹಗುರವಾಗಲಿ ಮನಸಿನಾಳದ ಭಾರವು ಮೆದ್ದುಬೆಲ್ಲವಲುಲಿವ ಸೊಲ್ಲದು ಕಲ್ಲು ಕರಗಿಸೋ ಮಾಯೆಯು ಕಟ್ಟುಬುತ್ತಿಯ ಬಿಚ್ಚಿಕನಸಿನ ಬಿಂದು ಸೇರಿಸೋ ಕಾಲವು ಕೂಡಿಬಂದಿದೆ ಎಣಿಸದೇನನು ರೆಕ್ಕೆಬಡಿದರೆ ದಾರಿಯು ಮಕರನರಸುತ ಧನುವಿನಿಂದಲಿ ಜಾರಿಬಂದನು ಕಾಂತನು ಜಡತೆಛಳಿಯನು ದೂರಕಟ್ಟುವ ಉತ್ತರಾಯಣ ಪ್ರಖರನು ಪ್ರೀತಿ ಪ್ರೇಮದ ಒಡಲುಕಾಣೆಯಾ ಕಾಂತರಂಗನ ಮಟ್ಟಿಯು ಸಲುಗೆಬೆಳಕದು ಕಡೆದುಚೆಲ್ಲಿದೆ ಒಡಲಸ್ನೇಹದ ಬೆಣ್ಣೆಯು ದಾಟಿಬಂದಿಹ ಕಲ್ಲುಕಲ್ಲವು ಕೂಡಿಕೊಟ್ಟುತ್ಕರ್ಷವು ಇರದದಾರಿಯ ಕಾಣೋಕಣ್ಣಿಗೆ ಮರೆಯದೆಂದೂ ಲಕ್ಷ್ಯವು ಬೆಳಗಿಕರಗುವ ತಾರೆಜೀವನ ಹುಡುಕಿಲಾಭವೇ ಕಾರಣ ಘಳಿಗೆಘಳಿಗೆಯ ಹೊಸತು ಕಾಣುವಮಿಡಿತತಾನೆ ಹೂರಣ