Posts

ಜಾರಬೇಡ ನಾರಿ

ಜಾರಬೇಡ ನಾರಿ ನನ್ನ ತೆಕ್ಕೆಗೆ ಬಾ ಸೇರೂ, ನನ್ನ ಹೃದಯದರಮನೆಯಲ್ಲಿ ನಿನ್ನದೆ ಕಾರೊಬಾರು. ಅಪಧಮನಿ ಅಭಿಧಮನಿ ಎಲ್ಲ ನಿನ್ನ ಪಾಲಾಯ್ತು. ನೀ ಹೇಳಿದ ತಾಳವ, ಹೃದಯಾ ತಾಡಿಸುತಾ ನಿಲದಾಯ್ತು ನೀ ನಗುವಾ ಪ್ರತಿ ಘಳಿಗೆ ನನ್ನೊಳಗೆ ಹೊಸಯಿಸುವೆ ನಿನ್ನೊಲವಿನ ಒರತೆಗೆ ಒಡೆಯಾ ಅತಿಮಾನುಶ ನಾನೆನುವೆ ನಾ ಮಾಮರವಾದರೆ ನೀನು ಒಳ ಹರಿವ, ಹರಿತ್ತು ಕಣೇ ನೀನಿರದೇ ಎಲ್ಲಿಯ ಕೊನರು ಮರು ಘಳಿಗೆಯೇ ನನ್ನ ಕೊನೆ ರಮೆಯೆ, ರಮಿಸೋ ನನ್ನಯ ಸಾಲೂ ಸೋಗಲ್ಲ ಹಾಲು ಕಣೇ ಹುಳಿಯಾಗಿಹ ನಿನ್ನಯ ಮನಸಾ ತಿಳಿಯಾಗಿಸಿ ಬಾ ಜಾಣೆ ನೀನಿರದಾ ಮಗ್ಗಲು ನೆನೆದು ಕನವರಿಸುವ ಕವಿಯಾದೆ ಕಾದಿರುವಾ ತೆಕ್ಕೆಯ ಬಿಗಿದೂ ತೀರಿಸು ಬಾ ಈ ಭಾಧೆ

ಸ್ಮಶಾನ ವೈರಾಗ್ಯ

ಎತ್ತಿ ಆಡಿಸಿದ ಕೈಗಳು , ಕಟ್ಟಿ ಎದೆಗಪ್ಪಿರಲು ನೂರಾರು ಮೈಲಿ ಜೊತೆ ನಡೆದ ಕಾಲುಗಳು ಮರಗಳಂದದಿ ಮಡಚಿ ಚಕ್ಕುಲೂರಿರಲು ಸಂಸಾರದ ಬೆನ್ನೆಲುಬಾದ ಬೆನ್ನು ಕುಲುಮೆಗೆ ಮುಖಮಾಡಿರಲು ಹಸನ್ಮುಖಿಗೆ ಮೆರಗಿಟ್ಟ ಕಣ್ಗಳಿಗೆ ಬೆಳಕು ಬೇಡವಾಗಿರಲು ಬಾಳಿನುಸಿರಾದ ಹೊಳ್ಳೆಗಳಿಗೆ ಹತ್ತಿ , ಹೊದಿಕೆಯಾಗಿರಲು ಪ್ರಾಣ, ಪ್ರಕೃತಿಯ ಮಡಿಲು ಸೇರಿರಲು ನಿರ್ದಯಿ ನೇಸರನೆದುರು ನಾ ಅಸಹಾಯಕನಾಗಿರಲು ಅಂಧಕಾರದಂದದಿ ಆವರಿಸಿತ್ತು ನನ್ನ,  ಸ್ಮಶಾನ ವೈರಾಗ್ಯ ಕಂಡ ಕನಸುಗಳ ಅರ್ಥ ಮರೆಯಾಗಿ ಗೆದ್ದದ್ದು, ಗಳಿಸಿದ್ದೆಲ್ಲ , ವ್ಯರ್ಥವೇ ಆಗಿ ಬಣ್ಣ ಬಣ್ಣದ ಲೋಕ,  ಸುಟ್ಟಂತೆ ಕರುಕಲಾಗಿ ಜೀವನದ ಅರ್ಥ ಸಾರ್ಥಕಥೆಗಳು ಅನರ್ಥವಾಗಿ ಇರುವಿಕೆಯ ಮೇಲೆ ಪ್ರಶ್ನೆಗಳ ಮಳೆ ಸುರಿಯುತ್ತಿದ್ದ ನನಗಾಗ ಕಾರ್ಮೋಡವಾದದ್ದು ಸ್ಮಶಾನ ವೈರಾಗ್ಯ ನೀ ಆ ಘಳಿಗೆಗೆ ನನ್ನ ಮನಸ್ಥಿತಿಯ ಆಳಿದ ಸಾಮ್ರಾಟನೇ ಇರಬಹುದು ಜಗದ ಮಾಯೆ ನಿನ್ನನುಂಗಿ ಹಾಕಿದೆ ಇಂದು. ನಿದ್ದೆ ಮಾಡುವ ಕುಮ್ಭಕರ್ಣನಂತೆ ಆಗೊಮ್ಮೆ ಈಗೊಮ್ಮೆ  ಎದ್ದು ಬರುವೆ ನನ್ನವರವರಿವರು   ಕಾಲನೊಳಗೆ ಲೀನವಾದಾಗ

ಎಲ್ಲಿ ಕಳೆದಿರುವೆ ಇತಿಹಾಸ ?

ಎಲ್ಲಿ ಕಳೆದಿರುವೆ ಇತಿಹಾಸ ? ಕಾಲ ಚಕ್ರದ ಜೊತೆ ತಿರುಗಿ , ಭೂ ಒಡಲ  ಸೇರಿ  ಸುಟ್ಟು  ಕಾರಕಲಾಗಿರುವ , ಪಳಿಯುಳಿಕೆಗಳಲ್ಲೋ ? ಸಮುದ್ರಗಳ  ಘೋರ ದುರಂತಗಳಲ್ಲಿ ಮಡಿದ , ಜೀವಿಗಳ ಎಲುಬುಗಳಿಂದಾದ  ಡೊವರ್ ನಂತಹಾ  ಬಿಳಿ ಬೆಟ್ಟಗಳಲ್ಲೋ ? ಮರುಭೂಮಿಯ ನಿರಂತರತೆಯಲಿ  ನಿಂತ, ನೂರಾರು  ಅಡಿ ಎತ್ತರಕ್ಕೆ ಚಾಚಿದ ನಿಗೂಢ ಪಿರಾಮಿಡ್ಡುಗಳಲ್ಲೋ? ಮಹಾ ಸಾಗರದಡಿಯಲ್ಲಿ ಮೈಲುಗಟ್ಟಲೇ ಚಾಚಿರುವ  ರಾಮಸೇತುವಿನಲ್ಲೋ ? ಎಲ್ಲಿ ಕಳೆದಿರುವೆ ಇತಿಹಾಸ ?  ಐಸಿಸ್ ಉಗ್ರರ ಧಾಳಿಗೆ ಬಲಿಯಾದ ,  ಪಾಲ್ಮೀರಾ ದಂತಹ , ಐತಿಹಾಸಿಕ ನಗರಗಳಲ್ಲೋ ? ಧಾಳಿಕೋರ ಪರ್ಷಿಯನ್ನರ ಕೆಂಗಣ್ಣಿಗೆ ಮುರಿದುಬಿದ್ದ ,  ದೇವಾಲಯಗಳ   ಅವಶೇಷಗಳಲ್ಲೋ ? ಈರ್ಷೆಗೆ ಬಲಿಯಾಗಿ , ಸುಟ್ಟು ಕರಕಲಾದ , ಪುರಾತನ  ಗ್ರಂಥಗಳ , ಕಪ್ಪು  ಮೋಡಗಳಲ್ಲೋ ? ಆಂಗ್ಲರು ದೋಚಿದ , ಅಮೂಲ್ಯ ರತ್ನ ಆಭರಣಗಳು   ಅಡಗಿಸಿರುವ  ತಿಜೋರಿಗಳಲ್ಲೋ ? ಎಲ್ಲಿ ಕಳೆದಿರುವೇ ಇತಿಹಾಸ ?  ಆಕ್ರಮಣಕಾರರ ರಾಜಕೀಯ ದಬ್ಬಾಳಿಕೆಯಲಿ ಮರೆಯಾದ  ಸಮಾರಿಯನ್ ನಂತಹ ಭಾಷೆಗಳಲ್ಲೋ?   ಗುಳೆಯೆದ್ದ ಜನಾಂಗಗಳ , ಬದುಕಿನಲಿ    ಕಳೆದೋದ , ಸುಂದರ ಜಾನಪದ ಕಲೆಗಳಲ್ಲೋ ? ತನ್ನ ಭಾಷೆ , ಸಂಸ್ಕೃತಿಗೆ ಕಿಂಚಿತ್ತೂ  ಪ್ರೀತಿತೋರದ , ಕಲಿತ ಮೂರ್ಖರಲ್ಲೋ ?  ಸಮನ್ವತೆಯ ಹೆಸರಿನಲ್ಲಿ , ಸತ್ಯ ತಿರುಚಿರುವ   ಮಕ್ಕಳ ಪಠ್ಯ ಪುಸ್ತಕಗಳಲ್ಲೋ? ಎಲ್ಲಿ ಕಳೆದಿರುವೆ ಇತಿಹಾಸ ? ಓಟಿಗಾಗಿ

ಮತ್ತೆ ಬಾರದ ದಿನಗಳು

ಮತ್ತೆ ಬಾರದ ದಿನಗಳೆಲ್ಲಾ ನೆನಪಿನೋಡಲಲಿ ಗೂಡು ಕಟ್ಟಿವೆ ಹುಡುಗರಾಟದ   ಶುದ್ದಸುಂದರ ಘಳಿಗೆ ಘಳಿಗೆಯ ಹಿಡಿದಿವೆ ಬೆಳಗಿನಿಂದ ಸಂಜೆವರೆಗೂ ಬೀದಿ ಸುತ್ತಿದ ದಿನಗಳು ಗೆಳೆಯರೊಡನೆ ರಸ್ತೆ ಮದ್ಯೆ ಕ್ರಿಕೆಟ್ ಆಡಿದ ಕ್ಷಣಗಳು ಅದೆಷ್ಟು ಸಾರಿ ಚಾಳಿ ಬಿಟ್ಟೆ  , ಅದೆಷ್ಟುಸಾರಿ ಹಿಡಿದೆನೋ ಗೆಳೆಯ ನಂಜೊತೆ ಆಡದಿರಲು ಬಿದ್ದು ಬಿದ್ದು ಅತ್ತೇನೋ ಮನೆಯ ಜಗುಲಿಯ ಮುಂದೆ ಮಲಗಿ  , ಕಂಡ ಸುಂದರ ಆಗಸ ತೆರೆದ ಕಂಗಳ ನೂರು ಕನಸು , ನಿದ್ದೆ ಯತ್ನವು ನೀರಸ ಅಪ್ಪ ಸಂಜೆ ತರುವ ತಿಂಡಿ ಸಾಲದಾಯಿತು ಹೊಟ್ಟೆಗೆ ತಿಂದು ಸೀಪಿದ ನನ್ನ ಕೈಯು   ಜಾರಿತ್ತು ಅಮ್ಮನ ತಟ್ಟೆಗೆ ಅದೇನು ಮಾಯೆಯೋ ತಾಯಿ ಮಡಿಲು , ತೊಡೆದು ಬಿಡುವುದು ಎಲ್ಲ ನೋವಾ ಅಮ್ಮ ತಟ್ಟಲು ತಲೆಯ ಮೇಲೆ ಮರೆಯುತಿದ್ದೆ  ಲೋಕವಾ ಅಜ್ಜಿಮನೆಯಾ ರಜೆಯ ದಿನಗಳು , ಅತ್ತೆ ಮಾವನ ಪಿರ್ಯಾದಿಗಳು ಉಂಟೋ ಇಲ್ಲವೋ , ಕಷ್ಟ ಸುಖವೊ ಹಾರಾಡುವ ಈ  ಮೊಮ್ಮಕ್ಕಳು ಎಂಥ ಚೆಂದವೋ ಸ್ವಚಂದದ , ಶುದ್ಧ ಬಾಲ್ಯದ ದಿನಗಳು ಕಳೆದು ಹೋಗಿವೆ ಬೇಡಿ ಕರೆದರೂ ಬರವು ಆ ಕ್ಷಣಗಳು ಬದುಕು ಇಂದು ಬದಲಾಗಿದೆ , ಜವಾಬ್ದಾರಿಯ ಮೂಟೆ ಹೊತ್ತಿದೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ ಸಾಗಿದೆ ಇಂದೂ ಕೂಡ, ನಮ್ಮ ನಾಳೆಗೆ ಮತ್ತೆಬಾರದ ದಿನವೇ ಆಗಿದೆ ಪ್ರತೀ ಘಳಿಗೆಯ ರಸವ ಹೀರುವ ಮಾನಸ ಬುದ್ದಿಯು ಮಾಡಬೇಕಿದೆ ಬಾಲ್ಯ , ಯವ್ವನ , ಮದ್ಯ , ಮುಪ್ಪಿನ ಎಲ್ಲ ಅನುಭವ ಶ್ರೇಷವು ಮೇಲು ಕೀಳು ಮಾಡದೇನೆ , ಬದುಕು ಬ

ಇಬ್ಬನಿ

Woke up to a thick mist ಇಬ್ಬನಿ ಹನಿಯನು ಹೊದ್ದಿಸಿ ಹೊರಟಿಹ ಮಂಜಿನ ಪರಧಿಯ ಮೋಡಿಯಲಿ ಭುವಿಯನು ಕಾಣದೆ ರವಿಮನ ನೊಂದಿದೆ  ಸೋತಿದೆ ಬೆಳಕು ಯುದ್ದದಲಿ ದಾರಿಯು ಕಾಣದೆ ಕಾರಿನ ಕಣ್ಗಳು ತಿರುಗಲು ಅಂಜಿವೆ ಗಾಲಿಗಳು ಆಗಸ ಸಾಲದೆ ಭೂಮಿಯ ಮಡಿಲನು ಆವರಿಸಿಹ ಕಾರ್ಮೋಡಗಳು ತಳಮಳವಾದರೂ ಗೂಡನು ತೊರೆದಿವೆ ಕಾಳನು ಹುಡುಕುತ ಹಕ್ಕಿಗಳು ಬೆಳಕದು ಸೋತರೂ , ಸದ್ದದು ಗೆದ್ದಿದೆ ಸವಿನುಡಿ ಖಗಗಳ ಹಾಡುಗಳು ಬೆಟ್ಟದ ಸಾಲದು ಬಯಲಂತಾಗಿದೆ ಕಣ್ಣೆ ಮುಚ್ಚೆ ಆಟವಿದು ಅವಿತಿಹರಾರು ? ಹುಡುಕಿಹರಾರು? ನೇಸರ ಬರೆದಾ ಒಗಟುಯಿದು ಉರಿಯದ ಬೆಂಕಿಗೆ ಹೊತ್ತಿದ ಹೊಗೆಯಿದು ಶ್ವಾಸಕೆ ತಂಪನು ಈಯುವುದು ಜಡತೆಯ ತೊರೆದು , ಬಯಲೊಳಗಿಲಿದರೆ ಮನ ಉಲ್ಲಾಸದಿ ಈಜುವುದು ಮನ ಉಲ್ಲಾಸದಿ ಈಜುವುದು ಶ್ರೀನಿವಾಸ ಮಹೆಂದ್ರಕರ್

ದುಂಡುಹೊಟ್ಟೆ ತುಂಟ

ದುಂಡು ಹೊಟ್ಟೆ ತುಂಟನದು  ಇಲಿಯ ಜಂಬೂ ಸವಾರಿ  ಮುರಿದ ಹಲ್ಲು ಆನೆ ಮುಖ  ಇವನ ಸ್ಟಂಟು ನೋಡಿರಿ  ವರ್ಷ ವರ್ಷ ಬರುವನಿವನ  ಭಿನ್ನ ಭಿನ್ನ ಮಾದರಿ  ಗಾಂಧಿ ಗಣಪ , ನೆಹರು ಗಣಪ  ಇಂದು ಮೋದಿಗೂನು ಸೊಂಡಲಿ  ಗೂಟ ನೆಟ್ಟು ಪೆಂಡಾಲಾಕಿ ಕಟ್ಟೆಮೇಲೆ ಗಣಪನು  ನಲಿವ ಕುಣಿವ ಪಡ್ಡೆಗಳ  ರಾಜ್ಯಕಿವನೇ ರಾಜನು  ಕೆಂಪುಪಟ್ಟಿ ಹಣೆಯ ಮೇಲೆ  ಕಪ್ಪಾಯಿತು ಕುಣಿಯುತ  ಗಣೇಶಪಟ್ಟಿ ಜೇಬು ತುಂಬಿ  ಹೊಟ್ಟೆ ಪಾನಾವ್ರುತ  ಮನೆಗಳಲ್ಲಿ ಪುಟ್ಟ ಗಣಪ  ಮಕ್ಕಳಿಗೆ "ಬಾಲಗಣೇಶ್" ಎಲ್ಲರೊಡನೆ ಫೈಟು ಮಾಡಿ  ಗೆದ್ದು ಬರುವ ನಾಟಿ ಗಣೇಶ್  ಬಿದ್ದು ನಗಿಸಿ , ಎದ್ದು ನಗುವ  ಪಾರ್ವತಿಯ ಕಂದನು  ಮೂರೇ ಕ್ಷಣದಿ ಮೂರು ಲೋಕ  ಸುತ್ತುವ ಪ್ರಚಂಡನು  ಬರಮಾಡಿರಿ ಒಡಗೂಡಿರಿ ಈ ಚೌತಿ ಗಣೇಶನ  ಜೈ ಎನ್ನಿರಿ ಹರಸೆನ್ನಿರಿ  ನಮ್ಮ ಗಣಪತಿಬಪ್ಪನ  ನಮ್ಮ ಗಣಪತಿಬಪ್ಪನ     ( ಶ್ರೀನಿವಾಸ ಮಹೇಂದ್ರಕರ್)  ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು  ಶ್ರೀಕಸ್ತೂರಿನಿವಾಸ ಮತ್ತು ಹೃಶೀಕ್ 

ಎಂದೂ ಬರದವಳಂತೆ

ಎಂದೂ ಬರದವಳಂತೆ ಬೀಸಿ ಹೋದವಳೇ  ಬೆಟ್ಟದ ಮರೆಯಿಂದ ಇಣುಕುವೇಯೇಕೆ  ಸಂಜೆಗತ್ತಲ ನೆನೆದು ಬೆದರಿ ನಡೆದವಳೇ  ಬೆರಗು ಕದಿಯುವ ಬಯಕೆ ಮತ್ತೆ ನಿನಗೇಕೆ  ತುಂಬಿರುವ ಚಂದಿರನ ಮಡಿಲಲ್ಲಿ ಮಗುನಿದ್ದೆ  ಕೆಡಹುವ ಹುನ್ನಾರ ಮಾಡುತಿರುವೆ  ಮನೆಯ ದೀವಿಗೆ , ಮಿನುಗು ತಾರೆಗಳು  ಬೆಳಕ ಸಾಮ್ರಾಜ್ಯವಿದು ನೀ ಗಡೀಪಾರಾಗಿರುವೆ  ನಿಂತ ಮಳೆಯನು ತೊರೆದ ಮಾರುತವು ನೀನು  ಮುಂದಿನೂರಲೇ ಕರಗಿ ಸುರಿಯಬೇಕು  ನಿನ್ನರಸುವಂಗಳದಿ ಹಂಗು ಬಿಂಕವಬಿಟ್ಟು  ಸಿಹಿಹಸಿರ ಸುಗ್ಗಿಖುಷಿ ಬೆಳೆಸಬೇಕು  ಬದುಕ ಶಾಲೆಯ ನುರಿತ ಹೈಕಳು ನಾವು  ಬಂದದ್ದು ಹಿಡಿದದ್ದು ನಮ್ಮದೇನೆ  ಹೊಸತು ಹುಡುಕುವ ಕಣ್ಣು ನಮ್ಮೊಳಗೇ ಇರುವಾಗ  ಪ್ರತಿ ದಿನದ ಪ್ರತೀ ಕ್ಷಣವೂ ಬೆರಗುತಾನೆ ?                                              ಶ್ರೀನಿವಾಸ ಮಹೇಂದ್ರಕರ್