Posts

Showing posts from November, 2018

ಸ್ಮಶಾನ ವೈರಾಗ್ಯ

ಎತ್ತಿ ಆಡಿಸಿದ ಕೈಗಳು , ಕಟ್ಟಿ ಎದೆಗಪ್ಪಿರಲು ನೂರಾರು ಮೈಲಿ ಜೊತೆ ನಡೆದ ಕಾಲುಗಳು ಮರಗಳಂದದಿ ಮಡಚಿ ಚಕ್ಕುಲೂರಿರಲು ಸಂಸಾರದ ಬೆನ್ನೆಲುಬಾದ ಬೆನ್ನು ಕುಲುಮೆಗೆ ಮುಖಮಾಡಿರಲು ಹಸನ್ಮುಖಿಗೆ ಮೆರಗಿಟ್ಟ ಕಣ್ಗಳಿಗೆ ಬೆಳಕು ಬೇಡವಾಗಿರಲು ಬಾಳಿನುಸಿರಾದ ಹೊಳ್ಳೆಗಳಿಗೆ ಹತ್ತಿ , ಹೊದಿಕೆಯಾಗಿರಲು ಪ್ರಾಣ, ಪ್ರಕೃತಿಯ ಮಡಿಲು ಸೇರಿರಲು ನಿರ್ದಯಿ ನೇಸರನೆದುರು ನಾ ಅಸಹಾಯಕನಾಗಿರಲು ಅಂಧಕಾರದಂದದಿ ಆವರಿಸಿತ್ತು ನನ್ನ,  ಸ್ಮಶಾನ ವೈರಾಗ್ಯ ಕಂಡ ಕನಸುಗಳ ಅರ್ಥ ಮರೆಯಾಗಿ ಗೆದ್ದದ್ದು, ಗಳಿಸಿದ್ದೆಲ್ಲ , ವ್ಯರ್ಥವೇ ಆಗಿ ಬಣ್ಣ ಬಣ್ಣದ ಲೋಕ,  ಸುಟ್ಟಂತೆ ಕರುಕಲಾಗಿ ಜೀವನದ ಅರ್ಥ ಸಾರ್ಥಕಥೆಗಳು ಅನರ್ಥವಾಗಿ ಇರುವಿಕೆಯ ಮೇಲೆ ಪ್ರಶ್ನೆಗಳ ಮಳೆ ಸುರಿಯುತ್ತಿದ್ದ ನನಗಾಗ ಕಾರ್ಮೋಡವಾದದ್ದು ಸ್ಮಶಾನ ವೈರಾಗ್ಯ ನೀ ಆ ಘಳಿಗೆಗೆ ನನ್ನ ಮನಸ್ಥಿತಿಯ ಆಳಿದ ಸಾಮ್ರಾಟನೇ ಇರಬಹುದು ಜಗದ ಮಾಯೆ ನಿನ್ನನುಂಗಿ ಹಾಕಿದೆ ಇಂದು. ನಿದ್ದೆ ಮಾಡುವ ಕುಮ್ಭಕರ್ಣನಂತೆ ಆಗೊಮ್ಮೆ ಈಗೊಮ್ಮೆ  ಎದ್ದು ಬರುವೆ ನನ್ನವರವರಿವರು   ಕಾಲನೊಳಗೆ ಲೀನವಾದಾಗ

ಎಲ್ಲಿ ಕಳೆದಿರುವೆ ಇತಿಹಾಸ ?

ಎಲ್ಲಿ ಕಳೆದಿರುವೆ ಇತಿಹಾಸ ? ಕಾಲ ಚಕ್ರದ ಜೊತೆ ತಿರುಗಿ , ಭೂ ಒಡಲ  ಸೇರಿ  ಸುಟ್ಟು  ಕಾರಕಲಾಗಿರುವ , ಪಳಿಯುಳಿಕೆಗಳಲ್ಲೋ ? ಸಮುದ್ರಗಳ  ಘೋರ ದುರಂತಗಳಲ್ಲಿ ಮಡಿದ , ಜೀವಿಗಳ ಎಲುಬುಗಳಿಂದಾದ  ಡೊವರ್ ನಂತಹಾ  ಬಿಳಿ ಬೆಟ್ಟಗಳಲ್ಲೋ ? ಮರುಭೂಮಿಯ ನಿರಂತರತೆಯಲಿ  ನಿಂತ, ನೂರಾರು  ಅಡಿ ಎತ್ತರಕ್ಕೆ ಚಾಚಿದ ನಿಗೂಢ ಪಿರಾಮಿಡ್ಡುಗಳಲ್ಲೋ? ಮಹಾ ಸಾಗರದಡಿಯಲ್ಲಿ ಮೈಲುಗಟ್ಟಲೇ ಚಾಚಿರುವ  ರಾಮಸೇತುವಿನಲ್ಲೋ ? ಎಲ್ಲಿ ಕಳೆದಿರುವೆ ಇತಿಹಾಸ ?  ಐಸಿಸ್ ಉಗ್ರರ ಧಾಳಿಗೆ ಬಲಿಯಾದ ,  ಪಾಲ್ಮೀರಾ ದಂತಹ , ಐತಿಹಾಸಿಕ ನಗರಗಳಲ್ಲೋ ? ಧಾಳಿಕೋರ ಪರ್ಷಿಯನ್ನರ ಕೆಂಗಣ್ಣಿಗೆ ಮುರಿದುಬಿದ್ದ ,  ದೇವಾಲಯಗಳ   ಅವಶೇಷಗಳಲ್ಲೋ ? ಈರ್ಷೆಗೆ ಬಲಿಯಾಗಿ , ಸುಟ್ಟು ಕರಕಲಾದ , ಪುರಾತನ  ಗ್ರಂಥಗಳ , ಕಪ್ಪು  ಮೋಡಗಳಲ್ಲೋ ? ಆಂಗ್ಲರು ದೋಚಿದ , ಅಮೂಲ್ಯ ರತ್ನ ಆಭರಣಗಳು   ಅಡಗಿಸಿರುವ  ತಿಜೋರಿಗಳಲ್ಲೋ ? ಎಲ್ಲಿ ಕಳೆದಿರುವೇ ಇತಿಹಾಸ ?  ಆಕ್ರಮಣಕಾರರ ರಾಜಕೀಯ ದಬ್ಬಾಳಿಕೆಯಲಿ ಮರೆಯಾದ  ಸಮಾರಿಯನ್ ನಂತಹ ಭಾಷೆಗಳಲ್ಲೋ?   ಗುಳೆಯೆದ್ದ ಜನಾಂಗಗಳ , ಬದುಕಿನಲಿ    ಕಳೆದೋದ , ಸುಂದರ ಜಾನಪದ ಕಲೆಗಳಲ್ಲೋ ? ತನ್ನ ಭಾಷೆ , ಸಂಸ್ಕೃತಿಗೆ ಕಿಂಚಿತ್ತೂ  ಪ್ರೀತಿತೋರದ , ಕಲಿತ ಮೂರ್ಖರಲ್ಲೋ ?  ಸಮನ್ವತೆಯ ಹೆಸರಿನಲ್ಲಿ , ಸತ್ಯ ತಿರುಚಿರುವ   ಮಕ್ಕಳ ಪಠ್ಯ ಪುಸ್ತಕಗಳಲ್ಲೋ? ಎಲ್ಲಿ ಕಳೆದಿರುವೆ ಇತಿಹಾಸ ? ಓಟಿಗಾಗಿ

ಮತ್ತೆ ಬಾರದ ದಿನಗಳು

ಮತ್ತೆ ಬಾರದ ದಿನಗಳೆಲ್ಲಾ ನೆನಪಿನೋಡಲಲಿ ಗೂಡು ಕಟ್ಟಿವೆ ಹುಡುಗರಾಟದ   ಶುದ್ದಸುಂದರ ಘಳಿಗೆ ಘಳಿಗೆಯ ಹಿಡಿದಿವೆ ಬೆಳಗಿನಿಂದ ಸಂಜೆವರೆಗೂ ಬೀದಿ ಸುತ್ತಿದ ದಿನಗಳು ಗೆಳೆಯರೊಡನೆ ರಸ್ತೆ ಮದ್ಯೆ ಕ್ರಿಕೆಟ್ ಆಡಿದ ಕ್ಷಣಗಳು ಅದೆಷ್ಟು ಸಾರಿ ಚಾಳಿ ಬಿಟ್ಟೆ  , ಅದೆಷ್ಟುಸಾರಿ ಹಿಡಿದೆನೋ ಗೆಳೆಯ ನಂಜೊತೆ ಆಡದಿರಲು ಬಿದ್ದು ಬಿದ್ದು ಅತ್ತೇನೋ ಮನೆಯ ಜಗುಲಿಯ ಮುಂದೆ ಮಲಗಿ  , ಕಂಡ ಸುಂದರ ಆಗಸ ತೆರೆದ ಕಂಗಳ ನೂರು ಕನಸು , ನಿದ್ದೆ ಯತ್ನವು ನೀರಸ ಅಪ್ಪ ಸಂಜೆ ತರುವ ತಿಂಡಿ ಸಾಲದಾಯಿತು ಹೊಟ್ಟೆಗೆ ತಿಂದು ಸೀಪಿದ ನನ್ನ ಕೈಯು   ಜಾರಿತ್ತು ಅಮ್ಮನ ತಟ್ಟೆಗೆ ಅದೇನು ಮಾಯೆಯೋ ತಾಯಿ ಮಡಿಲು , ತೊಡೆದು ಬಿಡುವುದು ಎಲ್ಲ ನೋವಾ ಅಮ್ಮ ತಟ್ಟಲು ತಲೆಯ ಮೇಲೆ ಮರೆಯುತಿದ್ದೆ  ಲೋಕವಾ ಅಜ್ಜಿಮನೆಯಾ ರಜೆಯ ದಿನಗಳು , ಅತ್ತೆ ಮಾವನ ಪಿರ್ಯಾದಿಗಳು ಉಂಟೋ ಇಲ್ಲವೋ , ಕಷ್ಟ ಸುಖವೊ ಹಾರಾಡುವ ಈ  ಮೊಮ್ಮಕ್ಕಳು ಎಂಥ ಚೆಂದವೋ ಸ್ವಚಂದದ , ಶುದ್ಧ ಬಾಲ್ಯದ ದಿನಗಳು ಕಳೆದು ಹೋಗಿವೆ ಬೇಡಿ ಕರೆದರೂ ಬರವು ಆ ಕ್ಷಣಗಳು ಬದುಕು ಇಂದು ಬದಲಾಗಿದೆ , ಜವಾಬ್ದಾರಿಯ ಮೂಟೆ ಹೊತ್ತಿದೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ ಸಾಗಿದೆ ಇಂದೂ ಕೂಡ, ನಮ್ಮ ನಾಳೆಗೆ ಮತ್ತೆಬಾರದ ದಿನವೇ ಆಗಿದೆ ಪ್ರತೀ ಘಳಿಗೆಯ ರಸವ ಹೀರುವ ಮಾನಸ ಬುದ್ದಿಯು ಮಾಡಬೇಕಿದೆ ಬಾಲ್ಯ , ಯವ್ವನ , ಮದ್ಯ , ಮುಪ್ಪಿನ ಎಲ್ಲ ಅನುಭವ ಶ್ರೇಷವು ಮೇಲು ಕೀಳು ಮಾಡದೇನೆ , ಬದುಕು ಬ