ಹೋಳಿ ಅಲ್ಲವೇನು
ಹೋಳಿ ಅಲ್ಲವೇನು ಹೂವಿಗೊಂದು ಬಣ್ಣ , ಎಲೆಗೂ ಒಂದು ಬಣ್ಣ ಕೂಡಿ ಬದುಕುವ ಬಾಳಲ್ಲಿ ಸಂಭಂದಗಳದು ಹತ್ತು ಹಲವು ಬಣ್ಣ ಕಳೆವ ಘಳಿಗೆಯಲ್ಲ ಹೊಳಿಯಲ್ಲವೇನು ? ಬೆಳ್ಳಿ ಬೆಳಕ ಕಿರಣ , ನೋಡೆ ಬಿಳಿಯ ಬಣ್ಣ ಮಳೆಯ ಹನಿಗೆ ಚದುರಿದೋಡೇ , ನೋಡು ಏಳು ಬಣ್ಣ ಹಲವು ಭಾವನೆಗಳ ಹೊಮ್ಮಿಸುವ ಮನಸ್ಸಿನಲ್ಲಿ ದಿನವೂ ಹೊಳಿಯಲ್ಲವೇನು ? ಆಕಾಶ ನೀಲಿ ಬಣ್ಣ, ರವಿಯು ಚೆಲ್ಲಿ ಕೆಂಪು ಬಣ್ಣ ತೇಲಿ ನಡೆವ ಮೋಡಗಳದು ಚಿತ್ರ ವಿಚಿತ್ರ ಬಣ್ಣ ಕನಸ ರಂಗು ಚೆಲ್ಲಿ, ಹಸನು ಬದುಕ ಚಿತ್ರ ಬರೆದು ನಡೆದು ಸಾಗಿಹೆವವು ನಾವು ಇದು ಹೊಳಿಯಲ್ಲವೇನು? ಕಮಲ ಕೆಂಪು ಬಣ್ಣ , ಕೆಳಗೆ ಕೆಸರು ಕೊಚ್ಚೆಬಣ್ಣ ನೋವು ನಲಿವ ಪಯಣವಿದು ಹೊಳಿಯಲ್ಲವೇನು ? ಗಾಳಿಗಾವ ಬಣ್ಣ ? ಹರಿವ ನೀರಿಗಾವ ಬಣ್ಣ? ಕಾಣದೇನೆ ಜೀವನಾಡಿ ಇದು ಹೊಳಿಯಲ್ಲವೇನು ? ಶ್ರೀನಿವಾಸ ಮಹೇಂದ್ರಕರ್ http://www.srinivasapoems.blogspot.com/