ಉಪಮೇಯವೆಲ್ಲಿದೆ ?
ಕಾಣದ ಒಡಲ ನಡುಕಗಳು
ದೈತ್ಯ ಸುನಾಮಿಯಾಗಿರಲು
ಉಪಮೇಯವೆಲ್ಲಿದೆ ಭೂಮಿ ನಿನ್ನ ಉದ್ವೇಗಕೆ?
ನೀ ಜನ್ಮವಿತ್ತ ಮನುಕುಲ
ಬಲಿಯಾಗುತಿರಲು ನಿನ್ನ ನರ್ತನಕೆ
ಉಪಮೇಯವೆಲ್ಲಿದೆ ಭೂಮಿ ನಿನ್ನ ಕ್ರೌರ್ಯಕೆ ?
ಕನಸುಗಳ ಹುಟ್ಟಿಸಿ, ಅರಮನೆಯ ಕಟ್ಟಿಸಿ
ಜೀವರಾಶಿಗಳನೆಲ್ಲ ಕೊಚ್ಚಿಕೊಲ್ಲುವುದೇಕೆ
ಉಪಮೇಯವೆಲ್ಲಿದೆ ಭೂಮಿ ನಿನ್ನ ಹುಚ್ಚಾಟಕೆ?
ಸಾವಿರ ಸುನಾಮಿಗಳ ಎದುರಿಸಿನಿಂದು
ಮುಂದಿನ ಬದುಕಿನ ಕನಸ ಹಿಡಿದು ಸಾಗುತಲಿದೆ ಜೀವರಾಶಿ
ಉಪಮೇಯವೆಲ್ಲಿದೆ ಅದರ ಆಶಾವಾದಕೆ ?
ಕನಸಿಲ್ಲದ ಬದುಕು ಬದುಕೇ
ಎಂದುಬರೆದ ನಿಸಾರಹ್ಮದ್ ಸಾಲುಮಾತ್ರ ಕಾಡುತಿಹುದು
ಉಪಮೇಯವೆಲ್ಲಿದೆ ಅದರ ದೂರದೃಷ್ಟಿಗೆ ?
ಶ್ರೀನಿವಾಸ ಮಹೆಂದ್ರಕರ್
ದೈತ್ಯ ಸುನಾಮಿಯಾಗಿರಲು
ಉಪಮೇಯವೆಲ್ಲಿದೆ ಭೂಮಿ ನಿನ್ನ ಉದ್ವೇಗಕೆ?
ನೀ ಜನ್ಮವಿತ್ತ ಮನುಕುಲ
ಬಲಿಯಾಗುತಿರಲು ನಿನ್ನ ನರ್ತನಕೆ
ಉಪಮೇಯವೆಲ್ಲಿದೆ ಭೂಮಿ ನಿನ್ನ ಕ್ರೌರ್ಯಕೆ ?
ಕನಸುಗಳ ಹುಟ್ಟಿಸಿ, ಅರಮನೆಯ ಕಟ್ಟಿಸಿ
ಜೀವರಾಶಿಗಳನೆಲ್ಲ ಕೊಚ್ಚಿಕೊಲ್ಲುವುದೇಕೆ
ಉಪಮೇಯವೆಲ್ಲಿದೆ ಭೂಮಿ ನಿನ್ನ ಹುಚ್ಚಾಟಕೆ?
ಸಾವಿರ ಸುನಾಮಿಗಳ ಎದುರಿಸಿನಿಂದು
ಮುಂದಿನ ಬದುಕಿನ ಕನಸ ಹಿಡಿದು ಸಾಗುತಲಿದೆ ಜೀವರಾಶಿ
ಉಪಮೇಯವೆಲ್ಲಿದೆ ಅದರ ಆಶಾವಾದಕೆ ?
ಕನಸಿಲ್ಲದ ಬದುಕು ಬದುಕೇ
ಎಂದುಬರೆದ ನಿಸಾರಹ್ಮದ್ ಸಾಲುಮಾತ್ರ ಕಾಡುತಿಹುದು
ಉಪಮೇಯವೆಲ್ಲಿದೆ ಅದರ ದೂರದೃಷ್ಟಿಗೆ ?
ಶ್ರೀನಿವಾಸ ಮಹೆಂದ್ರಕರ್
Comments