ದುಂಡುಹೊಟ್ಟೆ ತುಂಟ

ದುಂಡುಹೊಟ್ಟೆ ತುಂಟನದು 
ಇಲಿಯ ಜಂಬೂ ಸವಾರಿ 
ಮುರಿದ ಹಲ್ಲು ಆನೆ ಮುಖ 
ಇವನ ಸ್ಟಂಟು ನೋಡಿರಿ 

ವರ್ಷ ವರ್ಷ ಬರುವನಿವನ 
ಭಿನ್ನ ಭಿನ್ನ ಮಾದರಿ 
ಗಾಂಧಿ ಗಣಪ , ನೆಹರು ಗಣಪ 
ಇಂದು ಮೋದಿಗೂನು ಸೊಂಡಲಿ 

ಗೂಟ ನೆಟ್ಟು ಪೆಂಡಾಲಾಕಿ
ಕಟ್ಟೆಮೇಲೆ ಗಣಪನು 
ನಲಿವ ಕುಣಿವ ಪಡ್ಡೆಗಳ 
ರಾಜ್ಯಕಿವನೇ ರಾಜನು 

ಕೆಂಪುಪಟ್ಟಿ ಹಣೆಯ ಮೇಲೆ 
ಕಪ್ಪಾಯಿತು ಕುಣಿಯುತ 
ಗಣೇಶಪಟ್ಟಿ ಜೇಬು ತುಂಬಿ 
ಹೊಟ್ಟೆ ಪಾನಾವ್ರುತ 

ಮನೆಗಳಲ್ಲಿ ಪುಟ್ಟ ಗಣಪ 
ಮಕ್ಕಳಿಗೆ "ಬಾಲಗಣೇಶ್"
ಎಲ್ಲರೊಡನೆ ಫೈಟು ಮಾಡಿ 
ಗೆದ್ದು ಬರುವ ನಾಟಿ ಗಣೇಶ್ 

ಬಿದ್ದು ನಗಿಸಿ , ಎದ್ದು ನಗುವ 
ಪಾರ್ವತಿಯ ಕಂದನು 
ಮೂರೇ ಕ್ಷಣದಿ ಮೂರು ಲೋಕ 
ಸುತ್ತುವ ಪ್ರಚಂಡನು 

ಬರಮಾಡಿರಿ ಒಡಗೂಡಿರಿ
ಈ ಚೌತಿ ಗಣೇಶನ 
ಜೈ ಎನ್ನಿರಿ ಹರಸೆನ್ನಿರಿ 
ನಮ್ಮ ಗಣಪತಿಬಪ್ಪನ 
ನಮ್ಮ ಗಣಪತಿಬಪ್ಪನ  
  ( ಶ್ರೀನಿವಾಸ ಮಹೇಂದ್ರಕರ್) 

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು 
ಶ್ರೀಕಸ್ತೂರಿನಿವಾಸ ಮತ್ತು ಹೃಶೀಕ್ 

Comments

Popular posts from this blog

ಸ್ಮಶಾನ ವೈರಾಗ್ಯ

ಜಾರಬೇಡ ನಾರಿ

ನಿದ್ರೆ ಬಾರದ ದಿನಗಳು