ಎಂದೂ ಬರದವಳಂತೆ



ಎಂದೂ ಬರದವಳಂತೆ ಬೀಸಿ ಹೋದವಳೇ 
ಬೆಟ್ಟದ ಮರೆಯಿಂದ ಇಣುಕುವೇಯೇಕೆ 
ಸಂಜೆಗತ್ತಲ ನೆನೆದು ಬೆದರಿ ನಡೆದವಳೇ 
ಬೆರಗು ಕದಿಯುವ ಬಯಕೆ ಮತ್ತೆ ನಿನಗೇಕೆ 

ತುಂಬಿರುವ ಚಂದಿರನ ಮಡಿಲಲ್ಲಿ ಮಗುನಿದ್ದೆ 
ಕೆಡಹುವ ಹುನ್ನಾರ ಮಾಡುತಿರುವೆ 
ಮನೆಯ ದೀವಿಗೆ , ಮಿನುಗು ತಾರೆಗಳು 
ಬೆಳಕ ಸಾಮ್ರಾಜ್ಯವಿದು ನೀ ಗಡೀಪಾರಾಗಿರುವೆ 

ನಿಂತ ಮಳೆಯನು ತೊರೆದ ಮಾರುತವು ನೀನು 
ಮುಂದಿನೂರಲೇ ಕರಗಿ ಸುರಿಯಬೇಕು 
ನಿನ್ನರಸುವಂಗಳದಿ ಹಂಗು ಬಿಂಕವಬಿಟ್ಟು 
ಸಿಹಿಹಸಿರ ಸುಗ್ಗಿಖುಷಿ ಬೆಳೆಸಬೇಕು 

ಬದುಕ ಶಾಲೆಯ ನುರಿತ ಹೈಕಳು ನಾವು 
ಬಂದದ್ದು ಹಿಡಿದದ್ದು ನಮ್ಮದೇನೆ 
ಹೊಸತು ಹುಡುಕುವ ಕಣ್ಣು ನಮ್ಮೊಳಗೇ ಇರುವಾಗ 
ಪ್ರತಿ ದಿನದ ಪ್ರತೀ ಕ್ಷಣವೂ ಬೆರಗುತಾನೆ ?

                                             ಶ್ರೀನಿವಾಸ ಮಹೇಂದ್ರಕರ್ 

Comments

Popular posts from this blog

ಸ್ಮಶಾನ ವೈರಾಗ್ಯ

ಜಾರಬೇಡ ನಾರಿ

ನಿದ್ರೆ ಬಾರದ ದಿನಗಳು