ಎಲ್ಲರಿಗೂ ಸಂಕ್ರಾಂತಿಯ ಶುಭಾಷಯಗಳು
------------------------------------------------
ಎಳ್ಳಿನಂದದಿ ಹಗುರವಾಗಲಿ ಮನಸಿನಾಳದ ಭಾರವು
ಮೆದ್ದುಬೆಲ್ಲವಲುಲಿವ ಸೊಲ್ಲದು ಕಲ್ಲು ಕರಗಿಸೋ ಮಾಯೆಯು
ಕಟ್ಟುಬುತ್ತಿಯ ಬಿಚ್ಚಿಕನಸಿನ ಬಿಂದು ಸೇರಿಸೋ ಕಾಲವು
ಕೂಡಿಬಂದಿದೆ ಎಣಿಸದೇನನು ರೆಕ್ಕೆಬಡಿದರೆ ದಾರಿಯು
ಮಕರನರಸುತ ಧನುವಿನಿಂದಲಿ ಜಾರಿಬಂದನು ಕಾಂತನು
ಜಡತೆಛಳಿಯನು ದೂರಕಟ್ಟುವ ಉತ್ತರಾಯಣ ಪ್ರಖರನು
ಪ್ರೀತಿ ಪ್ರೇಮದ ಒಡಲುಕಾಣೆಯಾ ಕಾಂತರಂಗನ ಮಟ್ಟಿಯು
ಸಲುಗೆಬೆಳಕದು ಕಡೆದುಚೆಲ್ಲಿದೆ ಒಡಲಸ್ನೇಹದ ಬೆಣ್ಣೆಯು
ದಾಟಿಬಂದಿಹ ಕಲ್ಲುಕಲ್ಲವು ಕೂಡಿಕೊಟ್ಟುತ್ಕರ್ಷವು
ಇರದದಾರಿಯ ಕಾಣೋಕಣ್ಣಿಗೆ ಮರೆಯದೆಂದೂ ಲಕ್ಷ್ಯವು
ಬೆಳಗಿಕರಗುವ ತಾರೆಜೀವನ ಹುಡುಕಿಲಾಭವೇ ಕಾರಣ
ಘಳಿಗೆಘಳಿಗೆಯ ಹೊಸತು ಕಾಣುವಮಿಡಿತತಾನೆ ಹೂರಣ
Comments
Yidu Marathi bhaSheysllidda mane maneya Sankranti habbada shuBheCcheyada anuvaada..
Sorry for not tying in Kannada Varsha.
Aravind Kulkarni
07968125839