ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ

ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ.

ಒಳಗಿದ್ದಾಗ್ ನಾನಿಂಗಿರ್ಲಿಲ್ಲ
ಲೋಕದ್ ಬ್ಯಾನಿ ತಿಳಿದಿರ್ಲಿಲ್ಲ
ನಂಪಾಡ್ಗ್ ನಾನ್ ಆಡ್ಕೊಂಡಿದ್ದೆ
ಬ್ಯಾಡ್ ಬ್ಯಾಡ್ ಅಂದ್ರು ಹಾಕ್ಕೊಂಡ್ ದಬ್ಡಿ
ಕೇಳಿದ್ನಾ ನಿಂಗ್ ನಾ ಬಡ್ತಿ .
ಕೇಳಿದ್ನಾ ನಿಂಗ್ ನಾ ಬಡ್ತಿ .

ನೀನ್ ಅಂದ್ಕೊಂಡ್ ಅಂದ್ಕೊಂಡ್ ಬಣ್ಣ ತೋರ್ಸಿ
ಅಂದ್ಕೊಂಡ್ ಜಾಗ್ದಾಗ್ ಬುದ್ದಿ ಬೆಳ್ಸಿ
ಒಳ್ಳೆವ್ರ್ ಕೆಟ್ಟೋವ್ರ್ ಮಾಡ್ತಿ
ಬ್ಯಾಡ್ ಬ್ಯಾಡ್ ಅಂದ್ರು ದೊಡ್ದೊರಾದ್ವಿ
ಕೇಳಿದ್ವಾ ನಿಂಗ್ ನಾವ್ ಬಡ್ತಿ ?
ಕೇಳಿದ್ವಾ ನಿಂಗ್ ನಾವ್ ಬಡ್ತಿ ?

ಹಾರ್ತೀನಂದ್ರೆ ಗಾಳಿ ಕೊಟ್ಟಿ
ಈಜ್ತೀನಂದ್ರೆ    ನೀರ್ ಕೊಟ್ಟಿ
ಕಷ್ಟ ಸುಖದ್ ಜೀವನ್ದಾಗೆ
ಎಂಥೆಲ್ಲ ಸೊಗ್ಸ ನೀನಿಟ್ಟಿ
ಗಂಡ ಹೆಂಡ್ತಿ ಮಕ್ಕಳ್ ಮರಿ
ಸೊಗಸಾದ್ ಗಂಟನ್ ಕಟ್ಟಿ
ಸೊಗಸಾದ್ ಗಂಟನ್ ಕಟ್ಟಿ

ಬ್ಯಾಡ್ ಬ್ಯಾಡ್ ಅಂದ್ರು ಕಟ್ಬಿಚ್ತೀಯ
ಎಲ್ರು ಮನಸನ್ ನೋಯ್ಸಿ
ಕಾಣದ್ ಊರ್ಗೆ ವರ್ಗ ಮಾಡ್ತಿ
ಉಳಿದೋರ್ ಕಣ್ಗಳ್ ತೊಯ್ಸಿ .
ಉಳಿದೋರ್ ಕಣ್ಗಳ್ ತೊಯ್ಸಿ .

ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ
ತಿಳಿಯೋದ್ ಹ್ಯಾಂಗ್ ನಿನ್ನ್ ಧಾಟಿ
ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ
ತಿರುಗಿಸ್ತಿ ನಿನ್ ರಾಟಿ.

Comments

ಸೊಗಸಾದ ಕವಿತೆ.ಭಾವ ದುಂಬಿ,ಮನವರ್ಪಿಸಿ ವೇದಾಂತಕ್ಕೆ ಕರೆದೊಯ್ದು ಪರಿಚಯಿಸಿಕೊಂಡಿದೆ
V.R.BHAT said…
ಶ್ರೀನಿವಾಸರೇ, ಹಗುರವಾದ ನಿತ್ಯದ ಶಬ್ದಗಳಲ್ಲಿ ಹೊರೆಭಾರವನ್ನು ಹೊತ್ತೊಯ್ಯುತ್ತಿರುವ ಕವಿತೆಯ ಒಳಹರಿವು ಸ್ವಲ್ಪ ಪಾರಮಾರ್ಥಿಕತೆಯನ್ನೂ ಬೋಧಿಸುತ್ತದೆ. ಚಿಕ್ಕದಾಗಿ ಹೇಳುವುದಾದ್ರೆ ಬ್ರಿಟಾನಿಯಾ 50:50 ಇದ್ದಹಾಗೇ ಸ್ವಲ್ಪ ಲೌಕಿಕ ಸ್ವಲ್ಪ ಅಲೌಕಿಕ ಎರಡರ ಸಂಗಮವಾಗಿ ಹೊರಬಂದ ಕವನ ಹಿಡಿಸಿತು. ಜಾಸ್ತಿ ಏನ್ ಹೇಳಾಂಗಿಲ್ ತಗೋರಿ, ಸಾದಾ ಶಬ್ದದಾಗಾನಾ ಇದ್ರೂ ವಿಶೇಷ ಅನ್ನಿಸ್ತದ, ಧನ್ಯವಾದಗಳು.

Popular posts from this blog

ದುಂಡುಹೊಟ್ಟೆ ತುಂಟ

ಮತ್ತೆ ಬಾರದ ದಿನಗಳು

ಸ್ಮಶಾನ ವೈರಾಗ್ಯ