ಗುನುಗು ಹಾಡಾಗೊ ಹಾದಿಯಲಿ
ನಡೆದೇ ನಾ ನಿನ್ನ ನೆನಪಲ್ಲಿ
ಅರಿಯುವಾ ಆಸೆ ಮನದಲ್ಲಿ
ಸನಿಹಕೆ ಹೇಗೆ ನಾಬರಲಿ
ನಿಶೆಯ ಸಹವಾಸ ನಿನಗೇಕೆ ?
ಶಶಿಯ ಆ ಅಂದ ಸವಿಯೋಕೆ
ಬೆಂಕಿಯಾ ಸನಿಹವು ಬೇಕೇನು ?
ಕೆಂಪಿರದೆ ಕಾಮನಬಿಲ್ಲೇನು
ಮುೞಿದೆ ನನ್ನ ಹಾದಿಯಲಿ !!
ನೋಡು ಆ ಹೂವ ನಗುವಲ್ಲಿ
ಭಾದಿಸದೆ ಬಿಡದು ಈ ಭ್ರಮೆಯೂ !!
ಕನಸಿರದೆ ಭ್ರಮಿಸಿದೆಯಾ ಭುವಿಯು
ಕಾಣದೆನೋ.... ಕೊನೆಯೂ ?
ಅಂತ್ಯವಿರದಾ ಈ ನಡೆಯು
ಹಗಲು ಕಂಡಾ ಭಾವಿಯಿದು !!
ಈಜಿ ಗೆಲುವಾ ಧೈರ್ಯವಿದು
ನೀತಿನಿಯಮಾ ಮೀರುವೆಯಾ ?
ಮಾಡಿದವ ಸಿಕ್ಕರೆ ಕಳಿಸುವೆಯಾ
ಗುನುಗು ಹಾಡಾಗೊ ಹಾದಿಯಲಿ
ನಡೆದೇ ನಾ ನಿನ್ನ ನೆನಪಲ್ಲಿ
ಅರಿಯುವಾ ಆಸೆ ಮನದಲ್ಲಿ
ಸನಿಹಕೆ ಹೇಗೆ ನಾಬರಲಿ
ಕಲಿಗಳೋತ್ತಮರು ಮುಂದಿಹರು! ಸೋಲಿಸಲು ಹವಣಿಸಿ ಕಾದಿಹರು ??
ಹಟವಿರದೆಯುತ್ತಮರಾಗಿಹರೆ ? ಸೋಲಲಂಜುವರು ಉತ್ತಮರೆ ?
ಕನಸಿಗೆ ಜೀವನ ಬಲಿಯೇಕೆ ?
ಕನಸಿರದ ಬದುಕೊಂದು ಬೇಕೇ
ದಾಟಿದವನೇ ಎಲ್ಲೆಗಳ , ಅಪ್ಪುಬಾ ನನ್ನ ಬಾಹುಗಳ.
ಧೈರ್ಯವಿರದೆ ಶಾಂತಿಯಿರದು. ಶಾಂತಿಯೇ ಮುಕ್ತಿಯ ಹಾದಿಯದು.
ಗುನುಗು ಹಾಡಾಗೊ ಹಾದಿಯಲಿ
ನಡೆದೇ ನಾ ನಿನ್ನ ನೆನಪಲ್ಲಿ
ಅರಿಯುವಾ ಆಸೆ ಮನದಲ್ಲಿ
ಸನಿಹಕೆ ಹೇಗೆ ನಾಬರಲಿ
Comments