ನೆರೆಯೂರ ಅಂಗಳದಿ
ನೆರೆಯೂರ ಅಂಗಳದಿ ಇರುಳೆಲ್ಲ ನೀ ಕಳೆದು
ಸಂಗಾತಿ ತೋಳಿನಲಿ ಪ್ರತಿಘಳಿಗೆ ನೀ ನಲಿದು
ಕರ್ತವ್ಯ ಕೂಗಿದೆಯೆಂದು ಓಡೋಡಿ ಬಂದಿರುವೆ
ಅವಳ ತುಟಿಯಂಚಿನ ಬಣ್ಣ ನಿನ್ನ ಮೊಗದಿಂದ
ಇನ್ನು ಕಳಚಿಲ್ಲವಲ್ಲ?
ಅದೆಷ್ಟು ಕಾಟವಿತ್ತೆಯೋ ಅವಳಿಗೆ , ಹಿಂಡಿದ ಕಿವಿಗಳ
ಕೆಂಪು ಮಾಯವಾಗಿಯೇ ಇಲ್ಲ
ಅರೆಕ್ಷಣವಾದರೂ ನಿದ್ದೆ ಮಾಡಬಾರದೆ ? ಕಣ್ಣು ಕೆಂಪಾಗಿ
ಮೊಗವು ಊದಿದೆಯಲ್ಲ ?
ಆಚೀಚೆಯ ಹಕ್ಕಿಗಳು ನಿನ್ನ ಮೊಗವ ಕಂಡು ನಕ್ಕು ಅನಕಿಸುತಿಹವು
ನಮ್ಮೊರನದಿ ಕನ್ನಡಿ ಹಿಡಿದಿದೆ, ಅಯ್ಯೋ ಮತ್ತಷ್ಟು ನಾಚಿ ಕೆಂಪಾದೆಯ?
ಅಂಜಿಕೆಯಿಂದ ನೀನೆಷ್ಟು ಮೋಡಗಳೊಳಗೆ ಮರೆಯಾದರೂ
ಆ ನಿನ್ನಾಟ ಊರೆಲ್ಲ ಸುದ್ದಿಯಾಗಿದೆ
ನಿನ್ನ ನೋಡಲೆಂದೇ ಅದೆಷ್ಟು ಜನ ನದಿ ತೀರದಲ್ಲಿ ಕಾದಿಹರು.

Comments