ಜಾರಬೇಡ ನಾರಿ

ಜಾರಬೇಡ ನಾರಿ ನನ್ನ
ತೆಕ್ಕೆಗೆ ಬಾ ಸೇರೂ,
ನನ್ನ ಹೃದಯದರಮನೆಯಲ್ಲಿ
ನಿನ್ನದೆ ಕಾರೊಬಾರು.
ಅಪಧಮನಿ ಅಭಿಧಮನಿ
ಎಲ್ಲ ನಿನ್ನ ಪಾಲಾಯ್ತು.
ನೀ ಹೇಳಿದ ತಾಳವ, ಹೃದಯಾ
ತಾಡಿಸುತಾ ನಿಲದಾಯ್ತು

ನೀ ನಗುವಾ ಪ್ರತಿ ಘಳಿಗೆ
ನನ್ನೊಳಗೆ ಹೊಸಯಿಸುವೆ
ನಿನ್ನೊಲವಿನ ಒರತೆಗೆ ಒಡೆಯಾ
ಅತಿಮಾನುಶ ನಾನೆನುವೆ
ನಾ ಮಾಮರವಾದರೆ ನೀನು
ಒಳ ಹರಿವ, ಹರಿತ್ತು ಕಣೇ
ನೀನಿರದೇ ಎಲ್ಲಿಯ ಕೊನರು
ಮರು ಘಳಿಗೆಯೇ ನನ್ನ ಕೊನೆ

ರಮೆಯೆ, ರಮಿಸೋ ನನ್ನಯ ಸಾಲೂ
ಸೋಗಲ್ಲ ಹಾಲು ಕಣೇ
ಹುಳಿಯಾಗಿಹ ನಿನ್ನಯ ಮನಸಾ
ತಿಳಿಯಾಗಿಸಿ ಬಾ ಜಾಣೆ
ನೀನಿರದಾ ಮಗ್ಗಲು ನೆನೆದು
ಕನವರಿಸುವ ಕವಿಯಾದೆ
ಕಾದಿರುವಾ ತೆಕ್ಕೆಯ ಬಿಗಿದೂ
ತೀರಿಸು ಬಾ ಈ ಭಾಧೆ

Comments

Popular posts from this blog

ಸ್ಮಶಾನ ವೈರಾಗ್ಯ

ನಿದ್ರೆ ಬಾರದ ದಿನಗಳು