ಇಬ್ಬನಿ

Woke up to a thick mist

ಇಬ್ಬನಿ ಹನಿಯನು ಹೊದ್ದಿಸಿ ಹೊರಟಿಹ
ಮಂಜಿನ ಪರಧಿಯ ಮೋಡಿಯಲಿ
ಭುವಿಯನು ಕಾಣದೆ ರವಿಮನ ನೊಂದಿದೆ 
ಸೋತಿದೆ ಬೆಳಕು ಯುದ್ದದಲಿ
ದಾರಿಯು ಕಾಣದೆ ಕಾರಿನ ಕಣ್ಗಳು
ತಿರುಗಲು ಅಂಜಿವೆ ಗಾಲಿಗಳು
ಆಗಸ ಸಾಲದೆ ಭೂಮಿಯ ಮಡಿಲನು
ಆವರಿಸಿಹ ಕಾರ್ಮೋಡಗಳು
ತಳಮಳವಾದರೂ ಗೂಡನು ತೊರೆದಿವೆ
ಕಾಳನು ಹುಡುಕುತ ಹಕ್ಕಿಗಳು
ಬೆಳಕದು ಸೋತರೂ , ಸದ್ದದು ಗೆದ್ದಿದೆ
ಸವಿನುಡಿ ಖಗಗಳ ಹಾಡುಗಳು
ಬೆಟ್ಟದ ಸಾಲದು ಬಯಲಂತಾಗಿದೆ
ಕಣ್ಣೆ ಮುಚ್ಚೆ ಆಟವಿದು
ಅವಿತಿಹರಾರು ? ಹುಡುಕಿಹರಾರು?
ನೇಸರ ಬರೆದಾ ಒಗಟುಯಿದು
ಉರಿಯದ ಬೆಂಕಿಗೆ ಹೊತ್ತಿದ ಹೊಗೆಯಿದು
ಶ್ವಾಸಕೆ ತಂಪನು ಈಯುವುದು
ಜಡತೆಯ ತೊರೆದು , ಬಯಲೊಳಗಿಲಿದರೆ
ಮನ ಉಲ್ಲಾಸದಿ ಈಜುವುದು
ಮನ ಉಲ್ಲಾಸದಿ ಈಜುವುದು
ಶ್ರೀನಿವಾಸ ಮಹೆಂದ್ರಕರ್

Comments

Popular posts from this blog

ಸ್ಮಶಾನ ವೈರಾಗ್ಯ

ಜಾರಬೇಡ ನಾರಿ

ನಿದ್ರೆ ಬಾರದ ದಿನಗಳು