Anna Hazare -1

ತಿಳಿದೋ ತಿಳಿಯದೆಯೋ
ಕೆರಳಿಯೋ ಅಸಹಾಯಕರಾಗಿಯೋ
ಭ್ರಷ್ಟ ವ್ಯವಸ್ಥೆಗೆ ಮೈಗೂಡಿಕೊಂಡು
ನಿರಾಶಾವಾದಿಗಳಾಗಿರುವ ಯುವಕರಿಗೆ
ಬೆಳಕ ತೋರಿಸಬಂದನೇ ಈ ವಯೋವೃದ್ದ ?

ನಿಜ ಸ್ವಾತಂತ್ರ್ಯದ ಸವಲತ್ತುಗಳೆಲ್ಲಾ
ಭ್ರಷ್ಟರ ತಿಜೋರಿಯಲಿ ಭಂಧಿಯಾಗಿರಲು
ಚೈತನ್ಯರಹಿತವಾಗಿರುವ ಯುವಕರ ತೋಳುಗಳಿಗೆ
ಶಕ್ತಿಯಾಗಿ ನಿಂತನೇ ಈ ವಯೋವೃದ್ದ?

ನಮ್ಮ ಅರಿವಿಗೆ ಬಾರದ ಕನಸ ಕಂಡನೆ ಇವನು?
ನಮ್ಮ ಮನದ ತುಡಿತಗಳ ಅರೆತುಕೊಂಡನೆ ಇವನು?
ದಶಕ ದಶಕಗಳ ಶಾಪ ತೊಡೆದು ಶಕ್ತಿಯಕೊಡಲು
ತನ್ನ ದೇಹಕೆ ದಂಡ ನಗುನಗುತ ನೀಡಿಹನು

ಹೀಗೆ ಅಲ್ಲವೆ ನಾವು ಆಂಗ್ಲರ ಗುಲಾಮಗಿರಿ ಮಾಡಿದ್ದು
ಹೀಗೆ ಅಲ್ಲವೆ ನಾವು ನಮ್ಮ ತನವ ಮರೆತದ್ದು ?
ಹೀಗೆ ಅಲ್ಲವೆ ಗಾಂಧಿ ಸ್ವಾತಂತ್ರ್ಯದ ಬಾಗಿಲು ತೆರೆದದ್ದು ?
ಹೀಗೆ ಅಲ್ಲವೆ ಪರಿವರ್ತನೆಗೆ ನಾಂದಿ ಆದದ್ದು ?

ಸ್ವಾತಂತ್ರ್ಯ ವೀರನಾಗುವ ಸದವಕಾಶವಿದುವೆ
ಪ್ರಗತಿಶೀಲ ಭಾರತದ ಸದ್ಭವಿಷ್ಯಕ್ಕೆ ದಾರಿ ಇದುವೆ
ಬನ್ನಿ ಓಗೊಡುವ ಅನ್ನ ಹಜಾರೆಯ ಕರೆಗೆ
ಮುಡಿಪಿಡುವ ಕೆಲಸಮಯ ಜನ್ಮಭೂಮಿಗೆ







Comments

Mallikarjun said…
Mahendrakar at his best... one of the best i have read from your collection of poems...

Popular posts from this blog

ದುಂಡುಹೊಟ್ಟೆ ತುಂಟ

ಮತ್ತೆ ಬಾರದ ದಿನಗಳು

ಸ್ಮಶಾನ ವೈರಾಗ್ಯ