ದೀಪಾವಳಿ ಶುಭಾಶಯಗಳು

ಹಗಲು ಜಾರುವ ಮುನ್ನ
ಇರುಳು ಇಳಿಯುವ ಮುನ್ನ
ಒಮ್ಮೆಯಾದರು ನೀ ಹಕ್ಕಿಯಂದದಿ ಹಾರು
ಮನವು ಕಂಡರಿಯದ  ಈ ಜಗಸೋಬಗ ತೋರು 

ಮೋಡ ಕಳಚುವ ಮುನ್ನ
ಮಳೆಯೂ ನಿಲ್ಲುವ ಮುನ್ನ
ಹನಿಯ ಸ್ಪರ್ಶಕೆ ಒಮ್ಮೆ ಮೈಯೊಡ್ಡಿನೋಡು
ಕೊರಳಲ್ಲಿ ಚಳಿ  ಇಳಿಯೇ  ಮೈದುಂಬಿ ಹಾಡು 

ನೋಟ ಮರೆಯುವ ಮುನ್ನ
ಪರಧೆ ಕಳಚುವ ಮುನ್ನ
ಬದುಕಿನಾ ಚಿತ್ತಾರ ನಿತ್ಯೋತ್ಸಾಹದಿ ನೋಡು 
ಮಳೆಬಿಲ್ಲಿನೋಳಗೊಮ್ಮೆ  ಕಟ್ಟು ಕನಸಿನ ಗೂಡು

ಗಾಳಿ ಬಿರುಸಾಗುವ ಮುನ್ನ
ಸೂತ್ರ ಹರಿಯುವ ಮುನ್ನ
ಚಿನ್ನರಾ ಮೊಗದೊಳಗೆ ಮುಗುಳುನಗೆ ತೋರು
ನಗುತ ನಗಿಸುವ ಬಗೆಯ ಈ ಜಗಕೆ ಸಾರು

ದೀಪಗಳ ಹಬ್ಬ ಬಂದು ಹೋಗುವ ಮುನ್ನ
ಹಣತೆಯ ಬೆಳಕು ಮುಸುಕಾಗುವಾ ಮುನ್ನ
 ಆಳದ ಮೌಡ್ಯಗಳ ಎಣ್ಣೆಯಾಮಾಡು
ಉತ್ಸಾಹ ದೀವಿಗೆಯ ದಿನಬೆಳಗಿ ನೋಡು

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

Comments

Santosh said…
this is amazing and I would say very thoughtfully written, keep the good work going..

Popular posts from this blog

ದುಂಡುಹೊಟ್ಟೆ ತುಂಟ

ಮತ್ತೆ ಬಾರದ ದಿನಗಳು

ಸ್ಮಶಾನ ವೈರಾಗ್ಯ