ನಿನ್ನ ಪಾಲು :

Note : This poem is the thematic translation of Briyan Adems song "Do it for you"

ಕಣ್ಣೊಳಗೆ ಕಣ್ಣಿಟ್ಟು ಒಮ್ಮೆ ನೋಡೆನ್ನ ಗೆಳತಿ
ಕಾಣದಿರದು ನಿನ್ನ ಒಲವ ಬೆಲೆಯು
ನಿನ್ನಂತರಾಳವಾ ಹುಡುಕಾಡು ಗೆಳತಿ
ನನ್ನ ಕಂಡಘಳಿಗೆ ಹುಡುಕು ಕಾಣೆಯಾಗದಿರದು

ಈ ಹುಡುಕಾಟ ಅರ್ಥಹೀನವೆನ್ನದಿರು
ನಿನಗಾಗಿ ಸಾಯುವ ಗರಿಮೆಯ ತೆಗಳದಿರು
ಎಂದೆಂದೂ ನೀನಿದ ಮರೆಯದಿರು
ನನ್ನ ಪ್ರತಿಕೃತಿಯೂ ನಿನ್ನ ಪಾಲು

ನಿನ್ನೆದೆಯೊಳಗೊಮ್ಮೆ ಕಣ್ಣ ಹಾಯಿಸಿ ನೋಡು
ಕಾಣದಿರದು ನನ್ನ ಮುಗ್ಧ ಒಲವು
ನನ್ನ ಜೀವವ ನೀ ದೇಣಿಗೆಗೆ ಕೇಳು
ಸಂತಸದಿ ಕೊಡುವೆ ನನ್ನ ಪ್ರಾಣವನು

ನಿನಗಾಗಿ ಹೊಡೆದಾಟ ವ್ಯರ್ಥವೇನೂ ಅಲ್ಲ
ನೀನಿರದ ಬದುಕಲ್ಲಿ ದಾರಿಏ ಇಲ್ಲ
ನಿನ್ನೊಲವಿಗಾಗಿ ಒಂಟಿ ಹಗ್ಗದ ನಡುಗೆ
ನಿನ್ನೊಲುಮೆಗಾಗಿ ಮುಗಿಯದಾ ಈಹಗೆ

ಈ ಹುಡುಕಾಟ ಅರ್ಥಹೀನವೆನ್ನದಿರು
ನಿನಗಾಗಿ ಸಾಯುವ ಗರಿಮೆಯ ತೆಗಳದಿರು
ಎಂದೆಂದೂ ನೀನಿದ ಮರೆಯದಿರು
ನನ್ನ ಪ್ರತಿಕೃತಿಯೂ ನಿನ್ನ ಪಾಲು

ಶ್ರೀನಿವಾಸ ಮಹೇಂದ್ರಕರ್

Comments

Popular posts from this blog

ದುಂಡುಹೊಟ್ಟೆ ತುಂಟ

ಮತ್ತೆ ಬಾರದ ದಿನಗಳು

ಸ್ಮಶಾನ ವೈರಾಗ್ಯ