ಗುಂಗ್ ಊರಿನಾ ಒಡತಿ
ನನ್ನ ಕಣ್ಣ ನೋಟವನ್ನು ಮುಚ್ಚಿ ಮಂಜು ಮಾಡುತಿ
ನಾ ನಡೆವಾ ಹಾದಿಯನ್ನು ಅದಲು ಬದಲು ಮಾಡುತಿ
ಓ ಗುಂಗ್ ಊರಿನಾ ಒಡತಿ ನನ್ನೆದೆಯ ಮೇಲೇಕೆ ನಡಿತಿ?
ನಾ ನೋಡುವಾ ಮುಖಗಳೆಲ್ಲದಲಿ ನಿನ್ನ ಬಿಂಬವಾ ಬರಿತಿ
ಮಾತು ಮಾತಿನಾ ನಡುವೆ ನಿಂದು, ನನ್ನುಸಿರನೇಕೆ ನೀ ತಡಿತೀ?

ದುಡಿದು ದಣಿದು ನನ್ನ ಕಣ್ಣು ಮುಚ್ಚಿರಲು ನಿದ್ದೆಯನೇಕೆ ಓಡಿಸುತಿ
ಊಟ ತಿಂಡಿಯಾ ನಡುವಿನಲ್ಲಿ ನನ್ನ ಹೊಟ್ಟೆಯನೇಕೆ ತುಂಬಿಸುತಿ?

ಚಂದಿರ ಮೊಗವಾ ನಿನ್ನದಾಗಿಸಿ ನನ್ನನಣುಕಿಸಿ ನಗುತೀ
ಕೊರೆವ ಚಳಿಯಲೂ ನಿನ್ನ ನೆನಪಿನಾ ಬೆಂಕಿಯೊಳಗೆ ನನ್ನ ಸುಡುತೀ

ನಾನೋದುವಾ ಪ್ರತಿ ಕಥೆಯಲೂ ವೇಶ ಮರೆಸಿ ನೀ ಬರುತೀ
ನನ್ನ ಕವಿತೆ ಪ್ರತಿಸಾಲಿನಲ್ಲೂ ನಿನ್ನ ಹೆಸರನೇಕೆ ನೀ ಬರಿತೀ?

ಶ್ರೀನಿವಾಸ ಮಹೇಂದ್ರಕರ್
03/03/2010

Comments
Sachin
Definitely I couldn't make out the meaning, unless you explain it to me. But I trust you would have written a best one.
I want to appreciate this blog venture of yours. Wish you all the best and keep posting more poems.
Welcome to Blogging !!