ಮತ್ತೆ ಬಾರದ ದಿನಗಳೆಲ್ಲಾ ನೆನಪಿನೋಡಲಲಿ ಗೂಡು ಕಟ್ಟಿವೆ ಹುಡುಗರಾಟದ ಶುದ್ದಸುಂದರ ಘಳಿಗೆ ಘಳಿಗೆಯ ಹಿಡಿದಿವೆ ಬೆಳಗಿನಿಂದ ಸಂಜೆವರೆಗೂ ಬೀದಿ ಸುತ್ತಿದ ದಿನಗಳು ಗೆಳೆಯರೊಡನೆ ರಸ್ತೆ ಮದ್ಯೆ ಕ್ರಿಕೆಟ್ ಆಡಿದ ಕ್ಷಣಗಳು ಅದೆಷ್ಟು ಸಾರಿ ಚಾಳಿ ಬಿಟ್ಟೆ , ಅದೆಷ್ಟುಸಾರಿ ಹಿಡಿದೆನೋ ಗೆಳೆಯ ನಂಜೊತೆ ಆಡದಿರಲು ಬಿದ್ದು ಬಿದ್ದು ಅತ್ತೇನೋ ಮನೆಯ ಜಗುಲಿಯ ಮುಂದೆ ಮಲಗಿ , ಕಂಡ ಸುಂದರ ಆಗಸ ತೆರೆದ ಕಂಗಳ ನೂರು ಕನಸು , ನಿದ್ದೆ ಯತ್ನವು ನೀರಸ ಅಪ್ಪ ಸಂಜೆ ತರುವ ತಿಂಡಿ ಸಾಲದಾಯಿತು ಹೊಟ್ಟೆಗೆ ತಿಂದು ಸೀಪಿದ ನನ್ನ ಕೈಯು ಜಾರಿತ್ತು ಅಮ್ಮನ ತಟ್ಟೆಗೆ ಅದೇನು ಮಾಯೆಯೋ ತಾಯಿ ಮಡಿಲು , ತೊಡೆದು ಬಿಡುವುದು ಎಲ್ಲ ನೋವಾ ಅಮ್ಮ ತಟ್ಟಲು ತಲೆಯ ಮೇಲೆ ಮರೆಯುತಿದ್ದೆ ಲೋಕವಾ ಅಜ್ಜಿಮನೆಯಾ ರಜೆಯ ದಿನಗಳು , ಅತ್ತೆ ಮಾವನ ಪಿರ್ಯಾದಿಗಳು ಉಂಟೋ ಇಲ್ಲವೋ , ಕಷ್ಟ ಸುಖವೊ ಹಾರಾಡುವ ಈ ಮೊಮ್ಮಕ್ಕಳು ಎಂಥ ಚೆಂದವೋ ಸ್ವಚಂದದ , ಶುದ್ಧ ಬಾಲ್ಯದ ದಿನಗಳು ಕಳೆದು ಹೋಗಿವೆ ಬೇಡಿ ಕರೆದರೂ ಬರವು ಆ ಕ್ಷಣಗಳು ಬದುಕು ಇಂದು ಬದಲಾಗಿದೆ , ಜವಾಬ್ದಾರಿಯ ಮೂಟೆ ಹೊತ್ತಿದೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ ಸಾಗಿದೆ ಇಂದೂ ಕೂಡ, ನಮ್ಮ ನಾಳೆಗೆ ಮತ್ತೆಬಾರದ ದಿನವೇ ಆಗಿದೆ ಪ್ರತೀ ಘಳಿಗೆಯ ರಸವ ಹೀರುವ ಮಾನಸ ಬುದ್ದಿಯು ಮಾಡಬೇಕಿದೆ ಬಾಲ್ಯ , ಯವ್ವನ , ಮದ್ಯ , ಮುಪ್ಪಿನ ಎಲ್ಲ ಅನು...
Comments